ಭಾರತೀಯ ಸನದು ಲೆಕ್ಕಿಗರ ಸಂಸ್ಥೆ ( ) ಭಾರತದ ವೃತ್ತಿಪರ ಲೆಕ್ಕಪರಿಶೋಧಕ ಸಂಸ್ಥೆಯಾಗಿದೆ ಮತ್ತು ಭಾರತ ಸರ್ಕಾರದ ಸಾಂಸ್ಥಿಕ ವ್ಯವಹಾರಗಳ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದ ಅಡಿಯಲ್ಲಿ ವಿಶ್ವದ 2 ನೇ ಅತಿದೊಡ್ಡ ವೃತ್ತಿಪರ ಲೆಕ್ಕಪತ್ರ ನಿರ್ವಹಣೆ ಸಂಸ್ಥೆಯಾಗಿದೆ. ಭಾರತದಲ್ಲಿ ಚಾರ್ಟರ್ಡ್ ಅಕೌಂಟೆನ್ಸಿ ವೃತ್ತಿಯ ಪ್ರಚಾರ, ಅಭಿವೃದ್ಧಿ ಮತ್ತು ನಿಯಂತ್ರಣಕ್ಕಾಗಿ ಸಂಸತ್ತು ಜಾರಿಗೊಳಿಸಿದ ಚಾರ್ಟರ್ಡ್ ಅಕೌಂಟೆಂಟ್ಸ್ ಕಾಯಿದೆ, 1949 ರ ಅಡಿಯಲ್ಲಿ ಶಾಸನಬದ್ಧ ಸಂಸ್ಥೆಯಾಗಿ ಇದನ್ನು ಜುಲೈ 1, 1949 ರಂದು ಸ್ಥಾಪಿಸಲಾಯಿತು. ಭಾರತ ದೆಶದ, ಲೆಕ್ಕಪರಿಶೋಧಕ ಮಾನದಂಡಗಳು ಮತ್ತು ಲೆಕ್ಕಪರಿಶೋಧನಾ ಮಾನದಂಡಗಳನ್ನು ರಾಷ್ಟ್ರೀಯ ಹಣಕಾಸು ವರದಿ ಪ್ರಾಧಿಕಾರ (ರಾ.ಹ.ವ.ಪ್ರಾ) ಭಾರತ ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ, ಇದು ಭಾರತದಲ್ಲಿ ಹಣಕಾಸು ಹೇಳಿಕೆಗಳ ಲೆಕ್ಕಪರಿಶೋಧನೆಯಲ್ಲಿ ಅನುಸರಿಸಬೇಕಾದ ಲೆಕ್ಕಪರಿಶೋಧನೆಯ ಮಾನದಂಡಗಳನ್ನು () ಹೊಂದಿಸುತ್ತದೆ. ಭಾರತದಲ್ಲಿನ ಇತರ ಹೆಸರಾಂತ ಲೆಕ್ಕಪರಿಶೋಧಕ ಸಂಶೋಧನಾ ಸಂಸ್ಥೆಗಳೆಂದರೆ ಭಾರತೀಯ ವೆಚ್ಚ ಲೆಕ್ಕಿಗರ ಸಂಸ್ಥೆ, ದೆಹಲಿ ವಿಶ್ವವಿದ್ಯಲಯ, ಕ್ಯಾಲಿಕಟ್ ವಿಶ್ವವಿದ್ಯಲಯ ಮತ್ತು ಮುಂಬೈ ವಿಶ್ವವಿದ್ಯಲಯ . ಮುಂತಾದವುಗಳು.